Friday, January 10, 2025

Logo
google-add

ಚಂದ್ರನ 5ನೇ ಮತ್ತು ಅಂತಿಮ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ ಚಂದ್ರಯಾನ-3

Technical | 13:50 PM, Wed Aug 16, 2023

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಪ್ರಮುಖ ಮೈಲಿಗಲ್ಲು ತಲುಪಿದೆ. ಬುಧವಾರ ಚಂದ್ರನ ಐದನೇ ಮತ್ತು ಅಂತಿಮ ಕಕ್ಷೆಗೆ ಪರಿಚಲನೆ ಪೂರ್ಣಗೊಳಿಸಿದೆ. ಈ ಮೂಲಕ ಚಂದ್ರನ ಇನ್ನಷ್ಟು ಸನಿಹಕ್ಕೆ ನೌಕೆ ತಲುಪಿದೆ.ಈ ಮೂಲಕ ಬಾಹ್ಯಾಕಾಶ ನೌಕೆಯು ಚಂದ್ರನ ಸುತ್ತ ಸುತ್ತುತ್ತ ಹತ್ತಿರ ತಲುಪುವ ಕಕ್ಷೆಯ ಪರಿಚಲನೆ ಕಾರ್ಯ ಪೂರ್ಣಗೊಳಿಸಿದೆ.

ಇನ್ನು ಮುಂದೆ ಅದು ಪ್ರಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಮಾಡ್ಯೂಲ್ ಪ್ರತ್ಯೇಕಗೊಳಿಸುವ ಹಂತಕ್ಕೆ ಸಿದ್ಧವಾಗಲಿದ ಎಂದು ಇಸ್ರೋ ತಿಳಿಸಿದೆ.

“ಇಂದು ಯಶಸ್ವಿ ಫೈರಿಂಗ್‌ ಮೂಲಕ ಚಂದ್ರಯಾನ-3ನ್ನು 153 km x 163 km ಕಕ್ಷೆಗೆ ತಲುಪಿಸಲಾಗಿದೆ. ಈ ಮೂಲಕ ಚಂದ್ರಯಾನವನ್ನು ಚಂದ್ರನ ಕಕ್ಷೆಗೆ ಪರಿಚಲನೆಗೊಳಿಸುವಂತಹ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನು ಪ್ರಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಮಾಡ್ಯೂಲ್ ಪ್ರತ್ಯೇಕಗೊಳಿಸುವ ಪ್ರಕ್ರಿಯೆ ನಡೆಸಬೇಕಿದೆ” ಎಂದು ಇಸ್ರೋ ಟ್ವೀಟ್‌ ಮಾಡಿದೆ.

ಆಗಸ್ಟ್‌ 23ರಂದು ಸಾಫ್ಟ್‌ ಲ್ಯಾಂಡಿಂಗ್‌ ಮೂಲಕ ಚಂದ್ರನ ಮೇಲ್ಮೈನಲ್ಲಿ ಚಂದ್ರಯಾನ3 ಲ್ಯಾಂಡರ್‌ ಅನ್ನು ಇಳಿಸುವಂತಹ ಪ್ರಕ್ರಿಯೆಯನ್ನು ಇಸ್ರೊ ನಡೆಸಲಿದೆ. ಇದು ಅತ್ಯಂತ ಪ್ರಮುಖವಾದ ಹಂತವಾಗಿರಲಿದೆ.

  • Trending Tag

  • No Trending Add This News
google-add
google-add
google-add
google-add
google-add
google-add